ಸೈಬಾರ್ಗ್ ಶ್ರೀನಿವಾಸ

Please Wait

ಡಾ. ಶಾಂತಲಾ ಅನಿಲ್

ಸೀನಿಗೆ ಲಲಿತಾಳ ಮೇಲೆ ಲವ್ ಆಗಿರದಿದ್ದರೆ ಈ ಕಥೆ ಹೇಳುವ ಪ್ರಮೇಯವೇ ಬರುತ್ತಿರಲಿಲ್ಲ.ಬಲಗಾಲು  ದುರ್ಬಲವಾಗಿದ್ದರಿಂದ  ಅವನ  ನಡಿಗೆ ವಕ್ರವಾಗಿತ್ತು.  ಕುಂಟು  ಕಾಲು,  ಕುಂಟು  ನಡಿಗೆಯ  ಬಗ್ಗೆ ಎಂದೂ  ತಲೆ  ಕೆಡಿಸಿಕೊಂಡವನೇ  ಅಲ್ಲ.  ಇಂಥಹವನಿಗೆ ಏಕ್ದಂ  ಅದಕ್ಕೆ  ಚಿಕಿತ್ಸೆ  ಮಾಡಿಸಿಕೊಳ್ಳಬೇಕು  ಎಂದು ಮನಸ್ಸಾಗಿದ್ದು,  ಆತ  ಕೆಲಸ  ಮಾಡುತ್ತಿದ್ದ  ಕಚೇರಿಗೆ  ಲಲಿತ ವರ್ಗಾವಣೆಯಾಗಿ ಬಂದಾಗ.

ಮಂಜು  ನಾಲ್ಕು  ದಿನದ  ಹಿಂದಷ್ಟೆ  ಅಮೇರಿಕಾದಿಂದ ಬಂದಿದ್ದರಿಂದ,  ವಾರಾಂತ್ಯಕ್ಕೆ  ಸೀನಿಯ  ಫ್ಲಾಟಿನಲ್ಲಿ  ನಾವು  ಮೂರು  ಜನ ಸೇರಿದ್ದೆವು. ಮೂರು ಪೆಗ್ಗಾದ ಮೇಲೆ ಸೀನಿ ತನ್ನ ಅಳಲನ್ನು ತೋಡಿಕೊಂಡಿ- ದ್ದ,ಈಗೆಲ್ಲ  ನನಗೆ  ವಾರಂತ್ಯದ  ಎರಡು  ದಿನ  ರಜೆ  ಬಂದ್ರೆ  ಬೇಜಾರಾಗತ್ತೆ ಕಣ್ರೊ.' ಅಂತ ಶುರು ಮಾಡಿ ಲಲಿತಳ ಬಗ್ಗೆ ಹೇಳಿದ್ದ. `ಆದ್ರೆ, ಹೇಳಿ ಕೇಳಿ ನಾನು ಕುಂಟು ಯುವಕ. ಆಕೆ ಎಲ್ಲರನ್ನು ಬಿಟ್ಟು ನನ್ನನ್ನ ಹೇಗೆ ತಾನೆ ಇಷ್ಟ ಪಡ್ತಾಳೆ'' ದೇವದಾಸ ಅವನಲ್ಲಿ ಆವಾಹನೆಯಾಗಿಬಿಟ್ಟಿದ್ದ.

ನಿನಗೆ  ಏನು  ಕಮ್ಮಿ  ಆಗಿದ್ಯೋ?  ಅಂತ  ನಾನು  ಶುರುಮಾಡಿಕೊಂಡು, ಅವನಿಗಿರುವ  ಸರ್ಕಾರಿ  ಕೆಲಸ,  ಊರಿನಲ್ಲಿನ  ಹೊಲ-ಗದ್ದೆ-ತೋಟ, ಒಳ್ಳೆ ಸಂಸ್ಕಾರದ ಮನೆತನ ಎಲ್ಲವನ್ನೂ ಎಣಿಸತೊಡಗಿದೆ.

ನಿನಗೆ  ಕಾಲು  ಸ್ವಾಧೀನವಿಲ್ಲ  ಅಂತ  ತಾನೆ  ಬೇಜಾರು? ಅದನ್ನು  ಸರಿ  ಮಾಡಿಸಿಕೊಂಡು  ಬಿಡು!!?  ಮಂಜುಗೆ  ಸ್ವಲ್ಪ ಜಾಸ್ತಿ  ಆಗಿ  ಏನೇನೋ  ಮಾತಾಡುತ್ತಿದ್ದಾನೆ  ಎಂದು  ನಾನು ಸುಮ್ನಿದ್ದೆ.  ಅವನು  ಮಾತು  ಮುಂದುವರೆಸಿದ.  ?ಈಗೇನಪ್ಪ? ನಿನ್ನ ಕಾಲನ್ನು ನಿನಗೆ ಬೇಕಾದಂತೆ ಚಲಿಸಿ, ನಿನಗೆ ಸರಿಯಾಗಿ ನಡೆಯಲು ಆಗಬೇಕು. ಅಷ್ಟೇ ತಾನೆ? ಮಾಡೋಣ!!?

ಅಂದ್ರೆ? ನೀನೇನ್ ದೇವ್ರ? ತಥಾಸ್ತು ಅಂತ ಮ್ಯಾಜಿಕ್ ಮಾಡಕ್ಕೆ? ಅಥವ ಈ ನಮ್ ಸೂರಿ ತರಹ ಸರ್ಜನ್ನಾ ಆಪರೇಶನ್ ಮಾಡಕ್ಕೆ? ನಿಂಗ್ ಜಾಸ್ತಿ ಆಗಿರ್ಬೆಕು  ಅಥವ  ನಂಗೇ  ಜಾಸ್ತಿ  ಆಯ್ತೇನೊ.  ಕಾಲ್  ಸರಿಹೋಗುತ್ತೇ ಅಂದಂಗೆ ಕೇಳಿಸ್ತಿದೆ!!? ಸೀನಿ ಅಳೋದೊಂದು ಬಾಕಿ.    

`ಇಲ್ಲೋ  ಮರಾಯ!!  ನಾನು  ಸರಿಯಾಗಿದ್ದೇನೆ,  ನೀನೂ  ಸರಿಯಾಗೇ ಕೇಳಿಸಿಕೊಂಡೆ!!''  ಮಂಜ  ಹಾಗೆ  ಹೇಳುತ್ತಿದ್ದಂತೆ  ಸೀನಿ  ಸೆಟೆದುಕೊಂಡು, ಅದು ಹೇಗೋ? ಎಂದ.

ನಾನು  ಆರ್ಟಿಫಿಶಿಯಲ್  ಇಂಟೆಲ್ಲಿಜೆನ್ಸ್    ವಿಭಾಗದಲ್ಲಿ    ಕೆಲಸ ಮಾಡುತ್ತಿರುವುದು ನಿಮಗೆ ತಿಳಿದಿದೆಯಲ್ಲಾ? ನರಮಂಡಲ-ಗಣಕಯಂತ್ರಗಳ ಸಂಪರ್ಕ ಸಾಧನಗಳು ನನ್ನ ಪರಿಣತಿ ಎಂದು ನಿಮಗೆ ಗೊತ್ತಿಲ್ಲ. ಕಂಪ್ಯೂಟರುಗಳ ಸಹಾಯದಿಂದ ಮನುಷ್ಯರ ಸಾಮರ್ಥ್ಯಗಳನ್ನು ಹೇಗೆಲ್ಲಾ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಬಹಳಷ್ಟು ಸಂಶೋಧನೆ ಮಾಡಿದ್ದೇನೆ.?

ಅಯ್ಯೋ!  ನಾವೆಲ್ಲರೂ  ದಿನ  ನಿತ್ಯ  ಕಂಪ್ಯೂಟರ್  ಸಹಾಯದಿಂದಲೇ ಅಲ್ವೇನೋ ಬದುಕುತ್ತಿರೋದು??
ಹೌದು.  ಅಂತಹ  ಕಂಪ್ಯೂಟರ್ರನ್ನೇ  ಮನುಷ್ಯನ  ಒಂದು  ಅಂಗವಾಗಿ ಸೇರಿಸಿಕೊಂಡರೆ??
ವ್ಹಾಹ್!! ನಿನಗೆ ಮೊದಲಿನಿಂದಲೂ ಸೈನ್ಸ್ ಫಿಕ್ಷನ್ ಇಷ್ಟ ಅಂತ ಗೊತ್ತು ಗುರು.  ಆದ್ರೆ  ಈ  ಮಟ್ಟಕ್ಕೆ  ಬಿಲ್ಡಪ್  ಬೇಡ!?  ಅರ್ಧ  ತಮಾಶಿ  ಅರ್ಧ ಗಂಭೀರವಾಗಿ ಸೀನಿ ಹೇಳಿದ,

ಇಲ್  ಕೇಳೊ  ಸೀನ.  ನೀನೊಬ್ಬ  ಕೂಪ  ಮಂಡೂಕ!  ಇದು  ಸೈನ್ಸ್ ಫಿಕ್ಷನ್  ಅಲ್ಲ.  ಅನೇಕ  ವರ್ಷಗಳ  ಹಿಂದೆಯೇ  ಮನುಷ್ಯರು  ತಮ್ಮನ್ನು ಕಂಪ್ಯೂಟರ್  ಜೊತೆ  ಬೆಸೆದುಕೊಂಡು  ಪ್ರಯೋಗ  ಮಾಡಿಕೊಂಡಿದ್ದಾರೆ. 1998 ರಲ್ಲಿ ಬ್ರಿಟೀಷ್ ಫ್ರೊಫೆಸರ್ ಕೆವಿನ್ ವಾರ್ಮಿಕ್ ತಮ್ಮ ಚರ್ಮದ ಕೆಳಗೆ ಪುಟ್ಟ  ಟ್ರಾನ್ಮಿಟ್ಟರ್  ಇರಿಸಿಕೊಂಡು,  ಅದರ  ಮೂಲಕ  ತಮ್ಮ  ಆಸು  ಪಾಸಿನ, ಕಂಪ್ಯೂಟರ್,  ಇಲೆಕ್ಟ್ರಾನಿಕ್    ಬಾಗಿಲು-ದೀಪಗಳನ್ನು  ತಮ್ಮ  ಹತೋಟಿಗೆ ತಂದುಕೊಳ್ಳುವಲ್ಲಿ  ಯಶಸ್ವಿಯಾದರು.  ಮತ್ತೂ  ಮುಂದುವರೆದು,  2002 ರಲ್ಲಿ  ತಮ್ಮ  ಕೈಯ್ಯೊಳಗೆ  ಒಂದು  ಮೈಕ್ರೊ  ಚಿಪ್  ಇರಿಸಿ,  ಕೈಯ್ಯಲ್ಲಿರುವ ಮೀಡಿಯನ್ ನವರ್್ ಎಂಬ ನರದ ಮೂಲಕ ಅವರ ನರಮಂಡಲ ಹಾಗು ಕಂಪ್ಯೂಟರ್ ಮಧ್ಯೆ ಸಂಪರ್ಕ ಸಾಧ್ಯವಾಯಿತು. ಆಮೇಲೆ ಈ ಕಂಪ್ಯೂಟರ್ರನ್ನು, ಅಮೆರಿಕೆಯ  ನ್ಯೂಯಾರ್ಕನಲ್ಲಿರುವ  ಕೊಲಂಬಿಯ  ಯ್ಯೂನಿವರ್ಸಿಟಿಯಲ್ಲಿ,  ಒಂದು ರೊಬೊಟಿಕ್ ಕೈ ಜೊತೆ ಸಂಪರ್ಕದಲ್ಲಿರಿಸಿದರು. ಏನಾಯ್ತು ಗೊತ್ತ? ಅವರ  ದೇಶದಲ್ಲಿ  ಅವರು  ತಮ್ಮ  ಕೈಯ್ಯನ್ನು  ಆಡಿಸಿದರೆ,  ಅಮೆರಿಕೆಯಲ್ಲಿದ್ದ ಅವರ  ರೋಬೋಟಿಕ್  ಕೈ  ಕೂಡ  ಹಾಗೆ  ಚಲಿಸುತ್ತಿತ್ತು.  ಅಥವ  ಅವರು `ಕೃತಕ  ಕೈ  `ಹೀಗೆ  ಚಲಿಸಲಿ'  ಎಂದು  ಮನಸ್ಸಿನಲ್ಲಿ  ಅಂದುಕೊಂಡರೆ  ಸಾಕು, ಸಾವಿರಾರು ಮೈಲಿ ದೂರದ ಆ ಕೈ ಚಲಿಸುತ್ತಿತ್ತು'  ನಮಗೆ ಅವನ ಮಾತು ಮನದಟ್ಟಾಗಲೆಂದು, ಮಾತು ನಿಲ್ಲಿಸಿ ನಮ್ಮ ಪ್ರತಿಕ್ರಿಯೆಗಾಗಿ ಕಾದ.  

ಸೀನ ತನ್ನ ಕುಂಟು ಕಾಲನ್ನು ಪ್ರೀತಿಯಿಂದ ಮುಟ್ಟಿ-ನೀವತೊಡಗಿದ. ಈ ಕಾಲು ಚಲಿಸಲಿ,? ಅನ್ಕೊಂಡ್ರೆ ಅದು ಚಲಿಸುವಂತಾದರೆ....!? ಎಂದು ಮೆಲ್ಲಗೆ ಅಂದ. ನನಗೆ ನಂಬಿಕೆಯಾಗಲಿಲ್ಲ ಎಂದು ಮಂಜು ಗ್ರಹಿಸಿದ.

 ಸೂರಿ,  ನಿನಗೆ  ನನ್ನ  ಮಾತಿನಲ್ಲಿ  ನಂಬಿಕೆ  ಬರದಿದ್ದರೆ  ಇಂಟರ್ನೆಟ್ ನೋಡು.  ವೈದ್ಯನಾದ  ನಿನಗೆ  ಗೊತ್ತಿಲ್ವ?  ಶರೀರದ  ರಾಸಾಯನಿಕ ಚಟುವಟಿಕೆಗಳೆಲ್ಲವೂ  ಎಲೆಕ್ಟ್ರಿಕಲ್  ತರಂಗಗಳ  ಮೂಲಕವೇ  ಜರುಗುತ್ತದೆ ಎಂದು? ನೀಲ್ ಹರ್ಬಿಸನ್ ಅಂತ ನೋಡು. ಹುಟ್ಟಿನಿಂದಲೂ ಆತನಿಗೆ  ಬಣ್ಣ  ಕುರುಡಿತ್ತು.  ಈಗವನು  ತನ್ನ  ಮೆದುಳಿಗೆ  ಒಂದು  ರಿಸೀವರ್ ಇರಿಸಿಕೊಂಡಿದ್ದಾನೆ.  ಬಣ್ಣಗಳು  ಎಲೆಕ್ತ್ರೋ-ಮ್ಯಾಗ್ನೆಟಿಕ್  ಅಂದರೆ ವಿದ್ಯುತ್ಕಾಂತೀಯ  ತರಂಗಗಳು  ತಾನೆ?  ರಿಸೀವರ್  ಬಣ್ಣಗಳ  ತರಂಗಗಳನ್ನು ಈತನ ಮೆದುಳಿಗೆ ಅರ್ಥವಾಗುವಂತೆ ಪರಿವರ್ತಿಸುತ್ತದೆ. ಇದ್ರಿಂದ ಏನಾಗುತ್ತೆ ಹೇಳು? ಇವನಿಗೆ ಬಣ್ಣಗಳನ್ನು ಕೇಳಿಸುತ್ತವೆ! ಈ ಹೆಚ್ಚುವರೆದ ಸಾಮರ್ಥ್ಯದಿಂದ ನೀಲ್ ಹಾರ್ಬಿಸನ್ ವಿಶಿಷ್ಟವಾದ ಸಂಗೀತ ಸಂಯೋಜಿಸಲು ಸಾಧ್ಯವಾಗಿದೆ. ಅಲ್ಲದೆ  ಇವನು  ಯಾವುದೇ  ಫೈಲ್,  ಫೋಟೊ  ಅಥವ  ಡಾಕ್ಯುಮೆಂಟ್ಸ್ ಅನ್ನು  ನೇರವಾಗಿ  ತನ್ನ  ಮೆದುಳಿಗೇ  ವರ್ಗಾಯಿಸಿಕೊಳ್ಳಲು  ಸಾಧ್ಯವಾಗಿದೆ!!  ಸೈಬಾರ್ಗ್ ಎಂಬ ಹೊಸ ಜಾತಿ ಹುಟ್ಟಿದೆ, ಅಂದರೆ ಸೈಬರ್ + ಆರ್ಗಾನಿಸಮ್. ಕಂಪ್ಯೂಟರೇ ಅಂಗವಾಗಿಬಿಟ್ಟ ಜೀವಿ.  

ಮಂಜು  ಉದ್ವಿಗ್ನನಾಗಿ  ಮಾತನಾಡುತ್ತಿದ್ದರೆ  ನಂಬದೇ  ಇರಲು ಸಾಧ್ಯವಿರಲಿಲ್ಲ. ಅಷ್ಟರಲ್ಲಾಗಲೇ ಸೀನಿ ಇಂರ್ನೆಟ್ಟಿನಿಂದ ಮತ್ತಷ್ಟು ಸೈಬಾರ್ಗ್ ಗಳ ಬಗ್ಗೆ ಮಾಹಿತಿ ಓದುತ್ತಿದ.. `ಸೂರಿ!  ಮಂಜ  ಹೇಳಿದ್ದ  ನೀಲ  ಹಾರ್ಬಿಸನ್ನನ್ನು  ಆತನ  ಸರ್ಕಾರವೇ ಅಧಿಕೃತವಾಗಿ  ಸೈಬಾರ್ಗ್  ಎಂದು  ಒಪ್ಪಿಕೊಂಡಿದ್ದಾರೆ.  ಮತ್ತಿಲ್ನೋಡೋ-ಮತ್ತಿಲ್ನೋಡೋ-ಜೆಸ್ಸೆ ಸುಲ್ಲಿವನ್ನನ್ನ ಕಥೆ. ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡ ನಂತರ ರೋಬೋಟಿಕ್  ಕೈಗಳನ್ನು ಅಳವಡಿಸಿಕೊಂಡಿದ್ದಾರಂತೆ. ತಮ್ಮ  ಶರೀರಕ್ಕೆ  ಹೇಗೆ  ಜೋಡಿಸಿಕೊಂಡಿದ್ದಾರೆ  ಎಂದರೆ,  ಹೀಗೆ  ಮಾಡು ಎಂದು  ಯೋಚಿಸಿದರೆ  ಸಾಕು..ಆ  ರೋಬೋಟಿಕ್  ಕೈಗಳು  ಹಾಗೆಯೇ ಚಲಿಸುತ್ತವಂತೆ!!  ಲೋ..ಮಂಜ...ನನಗೂ  ಹೀಗೆ  ಮಾಡಲು  ಸಾಧ್ಯವಾ? ನಾನು  ಮನಸ್ಸಿನಲ್ಲಿ  ಯೋಚಿಸಿದಂತೆ  ನನ್ನ  ಕಾಲು  ಚಲಿಸುವಂತಾದರೆ  ನನ್ನ ಕುಂಟ ನಡಿಗೆ ಸಂಪೂರ್ಣವಾಗಿ ಸರಿಹೋಗುತ್ತದೆ.? ಸೀನಿ ಗೋಗರೆಯುತ್ತಿದ್ದ.

ಎಲ್ಲೋ  ಬೇರೆ  ದೇಶದಲ್ಲಿ,  ಪ್ರಯೋಗಾಲಯಗಳಲ್ಲಿ  ನಡೆಯುತ್ತಿದ್ದ ಘಟನೆಗಳಿವು.  ಜನಸಾಮಾನ್ಯನಾದ  ಸೀನಿಗೆ  ಇದು  ಎಟುಕದ  ಮಾತು ಎಂದುಕೊಂಡು ನಾನು ಸುಮ್ಮನ್ನಿದ್ದೆ ಆದರೆ ಮಂಜು ಮಾತ್ರ,' ಮಾಡ್ಬೋದು ಕಣೋ!  ನಿನ್ನ  ಕಾಲು  ಸರಿಹೋಗುತ್ತದೆ!!?  ಅಂತ  ಬಹಳ  ಗಂಭೀರವಾಗಿ ಹೇಳಿಬಿಟ್ಟ!!

ಅವನ ಮಾತನ್ನು ಕೇಳಿ ಸೀನಿ, ಮಂಜಾ, ನಿಜವಾಗ್ಲೂ ಏನೋ'' ಕಣ್ಣರಳಿಸಿ ಮಗುವಿನಂತೆ ಕೇಳಿದ.

ಮಂಜ, ನೀನು ಅಮೇರಿಕೆಯಿಂದ ಸ್ವಲ್ಪ ದಿವಸಕ್ಕೆ ಊರಿಗೆ ಬಂದಿದ್ದೀಯ. ಇವನ ತಲೆಗೆ ಹುಳ ಬಿಟ್ಟು ಏನೇನೋ ಆಸೆ ಹತ್ತಿಸಿ ಹೋಗಬೇಡ ಗುರು. ಆಮೇಲೆ  ನನ್  ತಲೆ  ತಿಂತಾನೆ!!?  ಇವರಿಗೇ  ಒಂದೆರಡು  ಗುಟುಕು  ಜಾಸ್ತಿ ಆಯಿತೋ,  ಅಥವಾ  ನನಗೇ  ಸಹನೆ  ಕಡಿಮೆಯೋ...ಹೋಗಿ  ಮಲಗಿ ಬಿಡೋಣ ಎಂದೆದ್ದಾಗ ಮಂಜ ನನ್ನ ಕೈ ಎಳೆದು ಮತ್ತೆ ಕೂಡಿಸಿ,' ಸೂರಿ ನಾನು  ಅಮಲಿನಲ್ಲಿ  ಬಡಬಡಿಸುತ್ತಿಲ್ಲ.  ಸೋಬರ್  ಆಗಿದ್ದೇನೆ.  ಮನುಷ್ಯ- ಕಂಪ್ಯೂಟರ್  ಸಂಪರ್ಕ  ಮತ್ತು  ಅದನ್ನು  ಜನಸಾಮಾನ್ಯರಿಗೆ  ಹೇಗೆ ಉಪಯುಕ್ತವಾಗಿ  ಮಾಡಬೇಕೆಂಬುದೇ  ನನ್ನ  ಹಾಲಿ  ಅಧ್ಯಯನವಾಗಿದೆ. ಈ  ತಂತ್ರಜ್ನಾನವನ್ನು  ಬಳಸಿ  ನಮ್  ಸೀನಿಗೆ    ಅವನ  ಕಾಲನ್ನು  ಅವನೇ ಹತೊಟಿಯಲ್ಲಿಟ್ಟುಕೊಳ್ಳುವಂತೆ  ಮಾಡಬಹುದು!!  ಆದರೆ  ಅದಕ್ಕೆ  ನಿನ್ನ ಸಹಾಯ ಬೇಕು ಸೂರಿ!?

 ನಾನೇನ್ ಮಾಡಕ್ಕಾಗುತ್ತೋ? ಐಡಿಯಾ ನಿನ್ನದು-ಕಾಲು ಅವನದ್ದು.? ನೀನ್ ಸರ್ಜನ್ ಅಲ್ವೇನೋ? ಅದೂ ಬೆನ್ನು ಹುರಿಯ ಶಸ್ತ್ರಚಿಕಿತ್ಸೆಯೇ ನಿನ್ನ ಪರಿಣತಿ. ಮೈಕ್ರೋಚಿಪ್ ಅನ್ನು ನೀನೇ ಅವನ ಬೆನ್ನಿನಲ್ಲಿ ಇರಿಸಬೇಕು!!? ನಶೆ ಜರ್ರನೆ ಇಳಿದು ಭಯ- ಉದ್ವೇಗ-ಕುತೂಹಲ ಒಮ್ಮೆಗೆ ಹುಟ್ಟಿಕೊಂಡವು. ಹೊಸ  ವಿಧವಾದ  ಶಸ್ತ್ರಚಿಕಿತ್ಸೆ  ಕೈಚಳಕಕ್ಕೆ  ಸವಾಲು!  ಅಲ್ಲದೆ  ನಮ್  ಸೀನಿಗೆ ಸಹಾಯವಾಗಬಹುದು ಎಂದು ನಾನೂ ಉತ್ಸುಕನಾದೆ.

ಅದರೆ  ಈ  ಪ್ರಾಯೋಗಿಕ  ಚಿಕಿತ್ಸೆಗೆ  ಕಾನೂನು-ನೈತಿಕತೆ-ಅನುಮತಿ- ಪರವಾನಗಿ  ಎಂಬೆಲ್ಲಾ  ಅಡೆ-ತಡೆಗಳಿರುತ್ತದಲ್ಲೋ?  ಇವನನ್ನು  ಅಮೇರಿಕೆಗೆ ಕರೆದುಕೊಂಡು ಹೋಗಿ ಆಪರೇಶನ್ ಮಾಡಿಸಿಬಿಡು.?

`ಉಹುಂ  ಆಗಲ್ಲ.  ಅಲ್ಲೂ  ಎಲ್ಲ  ಬಹಳ  ಸ್ಟ್ರಿಕ್ಟ್  ಇದೆ.  ಇವನ  ಶಸ್ತ್ರಚಿಕಿತ್ಸೆ ಗೋಪ್ಯವಾಗಿ  ಇಲ್ಲಿಯೇ  ಮಾಡಬೇಕು.  ಸರ್ಕಾರಿ  ಅನುಮತಿ,  ಎನ್.ಜಿ.ಓ ಮನ್ನಣೆ  ಅಂತ  ಕೂತ್ರೆ,  ಇವನು  ಕುಂಟನಾಗಿಯೇ  ಸಾಯುತ್ತಾನೆ!!'  ಮಂಜ ಹಾಗೆ  ಹೇಳಿದಾಗ  ನಾನು  ಒಪ್ಪಿಕೊಳ್ಳುತ್ತಿರುವುದು  ಕಾನೂನು  ಬಾಹಿರ ಚಟುವಟಿಕೆ  ಎಂಬ  ಆಲೋಚನೆ  ಸುಳಿದು  ಬೆನ್ನು  ಹುರಿಯಲ್ಲೊಂದು ಮಂಜುಗಡ್ಡೆ ಜಾರಿತು.

ಸ್ವಲ್ಪ ಭಯ ಆಗತ್ತೆ. ಆಪರೇಶನ್ ಮಾಡಿದಮೇಲೆ ಎಷ್ಟು ದಿವಸಕ್ಕೆ ಇವನು ಸರಿಹೋಗ್ತಾನೆ??

ಮಾರನೆಯ ದಿನದಿಂದಲೇ!! ಆದರೆ ಎಲ್ಲಕ್ಕೂ ಮುಂಚೆ ಇವನ ಕಾಲಿನ ಸ್ನಾಯುಗಳು  ಹಾಗು  ಮೂಳೆ  ಗಟ್ಟಿಯಾಗಬೇಕು.  ಅದಕ್ಕೆ  ಸತತವಾಗಿ ಎರಡು  ಮೂರು  ತಿಂಗಳು  ಫಿಸ್ಯೋಥೆರಪಿ  ಆಗಬೇಕು.  ಅಷ್ಟರಲ್ಲಿ  ನಮ್ಮ ಪ್ರಯೋಗಾಲಯದಿಂದ  ಇವನಿಗೆ  ಒಫ್ಫುವಂತಹ  ಮೈಕ್ರೋಚಿಪ್-ಸರ್ಕೂಯಟ್ ತಯಾರಿಸಿ ತರುತ್ತೆನೆ.? ನಾವಿಬ್ಬರೂ ಸಂಬಂಧಪಟ್ಟ ತಾಂತ್ರಿಕ ವಿಷಯಗಳನ್ನು ಗಂಭೀರವಾಗಿ ಚರ್ಚಿಸುತ್ತಿದ್ದರೆ, ಪಾಪ ಸೀನಿ ನಮ್ಮನ್ನು ಧನ್ಯತಾ ಭಾವದಿಂದ ನೋಡುತ್ತಾ ಕುಳಿತುಬಿಟ್ಟ!!

ಇದಾದ  ಹದಿನಾಲ್ಕು  ವಾರಕ್ಕೆ  ಸೀನಿಯ  ಶಸ್ತ್ರಚಿಕಿತ್ಸೆ  ಮಾಡಿದ್ದೆ.  ಸೂರಿ, ನಿನಗೊಂದು ಸಣ್ಣ ವಿಷಯ ಹೇಳಲು ಮರೆತಿದ್ದೆನಮ್ಮ. ಅದೇನೆಂದರೆ ಆ ದಾರದಂತೆ ಇದ್ದ ಮೈಕ್ರೊ ಚಿಪ್ ಕೇವಲ ಸೀನನಿಗೆ ಕಾಲಾಡಿಸಲೆಂದು ಮಾತ್ರ ತಯಾರಿಸಿದ್ದಲ್ಲ. ಅದೊಂದು ರಿಸೀವರ್ ಕೂಡ!! ಈಗವನಿಗೆ ಅಂತರ್ಜಾಲದಿಂದ ಮಾಹಿತಿ ಪಡೆದುಕೊಳ್ಳಲು ಕಂಪ್ಯೂಟರ್ ಮುಂದೆ ಕೂರಬೇಕಿಲ್ಲ. ಅವನ ಮೆದುಳಿಗೆ ಎಲ್ಲಾ ಮಾಹಿತಿಗಳು ಬರುತ್ತವೆ. ಯಾವು ವಿಷಯವನ್ನು ಹುಡುಕಬೇಕೋ ಅದರ ಬಗ್ಗೆ ನೆನೆಯ ಬೇಕಷ್ಟೆ. ಎಲ್ಲಾ ಮಾಹಿತಿಗಳೂ ಅವನ ಮೆದುಳಿಗೆ ಬಂದು ಬೀಳುತ್ತದೆ. ಬೇಕಾದ್ದನ್ನು ಓದಿಕೊಂಡು ಮಿಕ್ಕದ್ದು ಮರೆತುಬಿಡಬಹು!!? ಬೇರೆ ಸಮಯದಲ್ಲಾದರೆ  ಮಂಜು ಯಾವುದೋ  ಕಾಗೆ-ಗೂಬೆ ಕಥೆ ಹೇಳ್ತಿದ್ದಾನೆ ಅಂತ ನಗುತ್ತಿದ್ದೆ. ಆದರೆ ಸೀನನ ವಿಚಿತ್ರ ನಡವಳಿಕೆ ನೋಡಿದ್ದ ನಾನು ನಂಬಲೇ ಬೇಕಾಯಿತು. ಹಿಂದೆಯೇ ಸಿಟ್ಟಿನಿಂದ,- ??ಅಲ್ಲ ಗುರು, ಸೀನನ ಮೆದುಳನ್ನೇ ಗೂಗಲ್ ಬ್ರೌಸರ್ ಮಾಡಿರೋದು ಸಣ್ಣ ವಿಷಯಾನಾ? ಆಪರೇಶನ್ ಮಾಡಿದ ಡಾಕ್ಟರ್ ನಾನು.

ಪರಿಚಯದವರ  ಆಸ್ಪತ್ರೆಯಾದರೂ,  ಗುಟ್ಟು  ಬಿಟ್ಟುಕೊಡುವಂತಿರಲಿಲ್ಲ.  ನನ್ನ ಆಪ್ತ ಸ್ನೇಹಿತ, ಬೆನ್ನು ನೋವಿಗೆ ಆಪರೇಶನ್ ಮಾಡಬೇಕು ಎಂದು ಸೀನೀನ ಅಡ್ಮಿಟ್ ಮಾಡಿಸಿದ್ದೆ. ಮಂಜ ತಯಾರಿಸಿ ತಂದಿದ್ದ ಮೈಕ್ರೋಚಿಪ್ ಮತ್ತಷ್ಟು ವಿಶಿಷ್ಟವಾಗಿತ್ತು!! ಸಾಮಾನ್ಯ ಮೈಕ್ರೊಚಿಪ್ಪಿನಂತೆ ಇರದೆ, ನಾವು ಶಸ್ತ್ರಚಿಕಿತ್ಸೆಯಲ್ಲಿ ಹೊಲಿಗೆ ಹಾಕಲು ಉಪಯೋಗಿಸುವ ಸಣ್ಣ, ಸಾಮಾನ್ಯ ದಾರದಂತೆ ಇತ್ತು. ಹೀಗಾಗಿ ನಾವಂದು ಮಾಡುತ್ತಿದ್ದ  ಶಸ್ತ್ರಚಿಕಿತ್ಸೆಯ ಮಹತ್ವ ನನಗೆ ಸಹಾಯ ಮಾಡಿದ  ನರ್ಸಿಗಾಗಲಿ  ಅಥವ  ಜ್ಞಾನ  ತಪ್ಪಿಸಿದ  ಅರಿವಳಿಕೆ  ತಜ್ಞರಿಗಾಗಿ ತಿಳಿಯಲೇ  ಇಲ್ಲ.  ಸೂರಿ,  ಬಹುಷಃ  ಇದು  ವಿಶ್ವದಲ್ಲಿಯೇ  ಮೊದಲ  ಚಿಕಿತ್ಸೆ ಇರಬಹುದು.  ಅಲ್ಲದೆ  ಇದರಲ್ಲಿ  ದಾರದಾಕಾರದ  ಚಿಪ್  ಇರಿಸಿರುವುದು ಮತ್ತೊಂದು  ವೈಶಿಷ್ಟ್ಯ!!    ಆದರೆ  ದುರಾದೃಷ್ಟವಶಾತ್  ಇಂಥಹ  ಆವಿಷ್ಕಾರಿ ಚಿಕಿತ್ಸೆಯನ್ನು    ನಾವು  ಬಹಿರಂಗ  ಪಡಿಸಲಾಗುವುದಿಲ್ಲ.  ಸೀನಿ  ಸಲೀಸಾಗಿ ನಡೆದಾಡಿದರೆ,  ಅದೇ  ನಿನ್ನ  ನೊಬೆಲ್  ಪುರಸ್ಕಾರ!!?  ಮಂಜ  ಮೊದಲೇ ಹೇಳಿದ್ದ.

ಎರಡು ದಿನಗಳ ನಂತರ ನಮ್ಮ ಶ್ರಮ ಫಲಿಸಿತ್ತು!! ಸೀನ ತನ್ನ ಕಾಲನ್ನು ಲೀಲಾಜಾಲವಾಗಿ  ಆಡಿಸತೊಡಗಿದ್ದ.  ನಾವು  ಮೂವರೇ  ಇದ್ದಾಗ  ಸ್ವಲ್ಪ ನಡೆದಾಡುತ್ತಿದ್ದ.  ಅವನನ್ನು  ಸುಮ್ಮನಿರಿಸುವುದು  ಕಷ್ಟವಾಗಿದ್ದರಿಂದ,  ಬೇಗ ಡಿಸ್ಚಾರ್ಜ್ ಮಾಡಿಸಿಕೊಂಡು ಫ್ಲಾಟಿಗೆ ವಾಪಸ್ಸಾದೆವು.

ಮನೆಗೆ ಬಂದ ಮೇಲೂ ಕಾಲಿಗೆ ಚೆನ್ನಾಗಿ ವ್ಯಾಯಾಮ ಮಾಡಿಸಿ ಒಂದು ವಾರದಲ್ಲಿಯೇ ಬಹುತೇಕ ಹುಶಾರಾಗಿಬಿಟ್ಟಿದ್ದ. ಕೆಲಸಕ್ಕೆ ವಾಪಸ್ಸಾಗಿ ಲಲಿತಾಗೆ ಲೈನ್  ಹೋಡೆಯೋದು  ಬಾಕಿ  ಇತ್ತು  ಸೀನಿಗೆ!!  ಅಂತೂ  ನನ್ನ  ಸ್ನೇಹಿತನ ಜೀವನದಲ್ಲಿ  ಹೊಸ  ಅಧ್ಯಾಯ  ಶುರುವಾಯಿತು  ಅಂತ  ನಾನು  ಖುಷಿಪಟ್ಟೆ. ಆದರೆ ಸೀನಿಯ ಕಥೆ ಈಗಷ್ಟೇ ಪ್ರಾರಂಭವಾಗಿ, ಕಾದಂಬರಿಯಾಗಿ ಮುಂದೆ ಬೃಹತ್ ಮಹಾಕಾವ್ಯವಾಗುತ್ತದೆಂದು ನಾನು ಊಹಿಸಿರಲಿಲ್ಲ!!

ಸೀನನ  ನಡುವಳಿಕೆಯಲ್ಲಿ  ಬದಲಾವಣೆ  ಕಂಡಿತು.  ಮೊದಲೆಲ್ಲಾ ಟಿ.ವಿ  ಅಥವ  ಕಂಪ್ಯೂಟರ್  ಮುಂದೆ  ಕೂತು  ಕಾಲ  ಕಳೆಯುತ್ತಿದ್ದ,  ಅಥವ ಏನಾದರೂ  ಪುಸ್ತಕ-ನ್ಯೂಸ್  ಪೇಪರ್  ಅಂತ  ಓದುತ್ತಲಿದ್ದ.  ಆದರೆ ಈಗೀಗ ಹಾಸಿಗೆ ಅಥವ ಸೋಫಾದ ಮೇಲೆ ಮಲಗಿರುತ್ತಿದ್ದ. ಮಧ್ಯೆ ಮಧ್ಯೆ ನಗುವುದು,  ಹಾಡು  ಗುನುಗಿಕೊಳ್ಳುವುದು  ಅಥವ  ಡ್ಯಾನ್ಸ್  ಮಾಡುವಂತೆ ಕೈಕಾಲು ಅಲ್ಲಾಡಿಸುವುದು ಮಾಡತೊಡಗಿದ. ಇವನಿಗೆ ಮಾನಸಿಕ ತೊಂದರೆ ಮೈದೂರಿರಬಹುದು  ಎಂದನಿಸತೊಡಗಿತು.  ಎರಡು  ಬಾರಿ  ಇವನ  ವಿಚಿತ್ರ ವರ್ತನೆಯನ್ನು ಮಂಜನಿಗೆ ಹೇಳಿದರೂ, ಆತ ಹೆಚ್ಚು ಗಮನ ಕೊಡದಿದ್ದದ್ದು ನನಗೆ ಬೇಸರ ಕೋಪ ಉಂಟು ಮಾಡಿತು, ಮನಶಾಸ್ತ್ರಜ್ಞ ಬಳಿ ನಡಿ ನೀನು, ಎಂದು ಸೀನೀನ ಪೀಡಿಸತೊಡಗಿದಾಗ  ಮಂಜ ಬಾಯ್ಬಿಟ್ಟಿದ್ದ.

  ಸೂರಿ,  ನಿನಗೊಂದು  ಸಣ್ಣ  ವಿಷಯ  ಹೇಳಲು  ಮರೆತಿದ್ದೆನಮ್ಮ. ಅದೇನೆಂದರೆ  ಆ  ದಾರದಂತೆ  ಇದ್ದ  ಮೈಕ್ರೊ  ಚಿಪ್  ಕೇವಲ  ಸೀನನಿಗೆ ಕಾಲಾಡಿಸಲೆಂದು  ಮಾತ್ರ  ತಯಾರಿಸಿದ್ದಲ್ಲ.  ಅದೊಂದು  ರಿಸೀವರ್  ಕೂಡ!! ಈಗವನಿಗೆ  ಅಂತಜರ್ಾಲದಿಂದ  ಮಾಹಿತಿ  ಪಡೆದುಕೊಳ್ಳಲು  ಕಂಪ್ಯೂಟರ್ ಮುಂದೆ ಕೂರಬೇಕಿಲ್ಲ. ಅವನ ಮೆದುಳಿಗೆ ಎಲ್ಲಾ ಮಾಹಿತಿಗಳು ಬರುತ್ತವೆ. ಯಾವು  ವಿಷಯವನ್ನು  ಹುಡುಕಬೇಕೋ  ಅದರ  ಬಗ್ಗೆ  ನೆನೆಯ  ಬೇಕಷ್ಟೆ. ಎಲ್ಲಾ ಮಾಹಿತಿಗಳೂ ಅವನ ಮೆದುಳಿಗೆ ಬಂದು ಬೀಳುತ್ತದೆ. ಬೇಕಾದ್ದನ್ನು ಓದಿಕೊಂಡು  ಮಿಕ್ಕದ್ದು  ಮರೆತುಬಿಡಬಹು!!?  ಬೇರೆ  ಸಮಯದಲ್ಲಾದರೆ  ಮಂಜು  ಯಾವುದೋ  ಕಾಗೆ-ಗೂಬೆ  ಕಥೆ  ಹೇಳ್ತಿದ್ದಾನೆ  ಅಂತ  ನಗುತ್ತಿದ್ದೆ. ಆದರೆ ಸೀನನ ವಿಚಿತ್ರ ನಡವಳಿಕೆ ನೋಡಿದ್ದ ನಾನು ನಂಬಲೇ ಬೇಕಾಯಿತು. ಹಿಂದೆಯೇ  ಸಿಟ್ಟಿನಿಂದ,-  ??ಅಲ್ಲ  ಗುರು,  ಸೀನನ  ಮೆದುಳನ್ನೇ  ಗೂಗಲ್ ಬ್ರೌಸರ್  ಮಾಡಿರೋದು  ಸಣ್ಣ  ವಿಷಯಾನಾ?  ಆಪರೇಶನ್  ಮಾಡಿದ ಡಾಕ್ಟರ್  ನಾನು.  ನನಗೇ  ಹೇಳಲು  ಮರೆತೆ  ಎಂದರೆ  ನಂಬ್ತೀನ? ಮೊದಲೇ  ನನಗೆ  ಕದ್ದು-ಮುಚ್ಚಿ  ಇಂಥಾ  ಆಪರೇಶನ್  ಮಾಡಿದೆ  ಎಂಬ  ಭಯ-ಗಿಲ್ಟ್  ಇದೆ.  ನೊಬೆಲ್  ಪುರಸ್ಕಾರ  ಇರಲಿ,  ಇದು  ಯಾರಿಗಾದರೂ ತಿಳಿದರೆ ನನ್ನನ್ನು ಜೈಲಿಗೆ ಹಾಕಿಸಿ, ನನ್ನ ಲೈಸೆನ್ಸ್ ರದ್ದು ಮಾಡ್ತಾರೆ. ಅಂಥಹದ್ರಲ್ಲಿ ಇದನ್ನು ಮಾಡಿದ್ದೀಯಾ? ನನಗೆ ಇದರ ಬಗ್ಗೆ ಮುಂಚಿತವಾಗಿ ತಿಳಿದಿರಲಿಲ್ಲ  ಎಂದರೆ ಯಾರಾದ್ರೂ ನಂಬ್ತಾರಾ? ನಿನ್ನ ನೆಚ್ಚಿಕೊಂಡು ಇವನಿಗೆ ಸಹಾಯ ಮಾಡಿದ್ದೇ ನನ್ನ ತಪ್ಪು!?

ಏಯ್!  ಯಾಕಮ್ಮ  ಇಷ್ಟು  ಟೆನ್ಶನ್  ಮಾಡ್ಕೋತ್ಯಾ?  ಅವನ ಮೆದುಳನ್ನು  ಬ್ರೌಸರ್  ಮಾಡುವಷ್ಟು  ಪರಿಣತಿ  ನನ್ನಲ್ಲಿ  ಇಲ್ಲ.  ಏನೋ  ತನ್ನ ಕಂಪ್ಯೂಟರ್ನಲ್ಲಿರುವ  ಕೆಲವು  ಹಾಡು,  ವಿಡಿಯೋಗಳನ್ನು  ನೋಡಬಹುದು ಅಷ್ಟೆ. ಅವನ ಕಂಪ್ಯೂಟರ್ರಿಗೆ ಜೋಡಿಸಿಕೊಳ್ಳುವಂತೆ ಪ್ರೋಗ್ರಾಮ್ ಮಾಡಿದ್ದೀನಿ ಅಷ್ಟೆ. ಅಷ್ಟಕ್ಕೂ ವಿಷಯ ಹೊರಬಂದರೆ ನೀನು ಒಂದು ಕಾನೂನು ಬಾಹಿರ ಆಪರೇಶನ್  ಮಾಡಿದರೂ  ಅಷ್ಟೆ,  ಎರಡು  ಮಾಡಿದರೂ  ಅಷ್ಟೆ.  ಸೇಮ್ ಪನಿಷ್ಮೆಂಟ್!?

ನನಗಿದು  ಬಿಸಿ  ತುಪ್ಪವಾಯಿತು.  ನುಂಗಲಾರೆ-  ಉಗಿಯಲಾರೆ!  ಕೇವಲ ಯಶಸ್ವಿಯಾದೆವು ಎಂದು ಒಳಗೊಳಗೇ ಬೀಗಬೇಕು. ನಮ್ಮ ವಾಗ್ವಾದವನ್ನು ಸೀನ ಕಿವಿಯ ಮೇಲೆ ಹಾಕಿಕೊಳ್ಳದೆ ಕಣ್ಮುಚ್ಚಿ ನಗುತ್ತಿದ್ದ.

ನೋಡು-ನೋಡು ಅವನನ್ನು! ಹೀಗೆ ಐಲು ಪೈಲಾಗಿ ತನ್ನಷ್ಟಕ್ಕೇ ನಕ್ಕು- ಮಾತನಾಡಿಕೊಂಡರೆ...ಜನ  ಏನಾದ್ರೂ  ಅನ್ಕೋಳ್ಳಿ..  ಆದರೆ  ನಮ್ಮ  ಗುಟ್ಟೂ ರಟ್ಟಾಗತ್ತೆ  ಅಷ್ಟೆ.  ಕಣ್ಮುಚ್ಚಿಕೊಂಡು  ಗೊಳ್  ಅಂತ  ನಗ್ತಾನೆ.  ಏನೋ  ಅಂತ ಕೇಳಿದ್ರೆ,  ನೆಟ್  ಅಲ್ಲಿ  ಒಳ್ಳೆ  ಜೋಕಿತ್ತಮ್ಮ!!'  ಅಂತಾನೆ.  ಈಗ  ನೋಡು ಯಾವುದೋ  ಅಶ್ಲೀಲ-ಲಂಪಟ  ವಿಡಿಯೋ  ನೋಡುತ್ತಿರಬೇಕು,  ಅದಕ್ಕೆ ಮುಖ ಎಲ್ಲ  ಕೆಂಪಗಾಗುತ್ತಿದೆ. ನೀನವನಿಗೆ ಹೇಳು ಗುರು. ಸ್ವಲ್ಪ ನಾರ್ಮಲ್ ಆಗಿ ನಡ್ಕೊ ಅಂತ!!''

ಮೂರನೆಯ ವಾರ ಸೀನಿ ಕಚೇರಿಗೆ ಹೋಗಲಾರಂಬಿಸಿದ. ನಾಲಕ್ನೆಯವಾರ ಮಹಾಕಾವ್ಯ ಶುರುವಾಯಿತು. ಲಲಿತಾಳನ್ನು  ಯಾವಾಗ  ಓಲೈಸಿಕೊಂಡು  ಮದುವೆಯ  ವಿಚಾರ ತಿಳಿಸುತ್ತಾನೆ  ಎಂದು  ಕಾಯುತ್ತಿದ್ದೆವು.  ಆದರೆ  ಅವನ  ನಡುವಳಿಕೆ  ಮತ್ತೆ ವಿಚಿತ್ರವಾಯಿತು.  ಮೊದಲಿನಂತೆ  ಟಿ.ವಿ  ನೋಡಿ  ಕೊಂಡು  ಪೇಪರ್  ಓದ ತೊಡಗಿದ.  ಪಾಪ  ಅನ್ನಿಸ್ತು.  ಕಾಲ್  ಸರಿಹೋಗಿ  ಮನಸು-ಮೆದುಳಿಗೆ ಏನಾಯ್ತೊ?

ಸೀನಿ ಏನಾಯ್ತು? ಯಾಕೆ ಸಪ್ಪಗಿದ್ದಿ??ಏನ್  ಹೇಳಲೋ?  ನಮ್ಮ  ಕಚೇರಿಯಲ್ಲಿ  ಯದ್ವಾ-ತದ್ವಾ  ಗೂಡಾಚಾರಿಕೆ ನಡೆಯುತ್ತಿದೆ!! ? ಇವನು ರಾಷ್ಟ್ರ ರಕ್ಷಣ ಕಾರ್ಯಾಲಯದಲ್ಲಿ ಕೆಲಸ  ಮಾಡುತ್ತಿದ್ದರಿಂದ  ಇವನ  ಮಾತನ್ನು  ಅಲ್ಲಗೆಳೆಯುವಂತೆ  ಇರಲಿಲ್ಲ.' ಲಲಿತಾಳೇ ಗೂಢಚಾರಿ!!?

ಆಂ??ನಾನು- ಲಲಿತಾಳ ಮೇಲೆ ಕಣ್ಣಿಡಲು ಆಕೆಯ ಹಾಗು ಮತ್ತಿಬ್ಬರು ಪುರುಷ ಸಹೋದ್ಯೋಗಿಗಳ ಕಂಪ್ಯೂಟರ್ಗಳೊಂದಿಗೆ ಸಂಪರ್ಕ ಬೆಳೆಸಿಕೊಂಡೆ!!? ಏನು?  ನಾನು  ಕೇವಲ  ಒಂದೇ  ಕಂಪ್ಯೂಟರ್  ಜೊತೆ  ಸಂಪರ್ಕ ಸಾಧ್ಯವಾಗುವಂತೆ ನಿನ್ನ ಮೈಕ್ರೋ ಚಿಪ್ ಸಂಯೋಜಿಸಿದ್ದೆ. ನಿನಗೆ ಎರಡು- ಮೂರು ಸಿಸ್ಟಮ್ಸ್ ಜೊತೆ ಸಂಪರ್ಕ ಸಾಧಿಸಲು ಸಾಧ್ಯಾವಾಯಿತಾ?? ಮಂಜು ಸ್ವಲ್ಪ ಭಯ-ಸ್ವಲ್ಪ ಹೆಮ್ಮೆಯಿಂದ. ಕೇಳಿದಹೂಂ ಮಾರಾಯ!! ಅಲ್ಲಿ ಕೆಲವು ಸಿಸ್ಟಮ್ ಗಳಲ್ಲಿ ಅತ್ಯಂತ ಗೋಪ್ಯವಾದ- ಸೂಕ್ಷ್ಮವಾದ  ಮಾಹಿತಿಗಳನ್ನು  ಸೇವ್  ಮಾಡಿರುತ್ತಾರೆ.  ಅವುಗಳ  ಭದ್ರತೆ ಹೇಗಿರುತ್ತದೆ ಎಂದರೆ ನಮಗೂ ಅಕ್ಸೆಸ್ ಇರುವುದಿಲ್ಲ. ಅಂತದ್ದು ಅಲ್ಲಿನ ಕೆಲವು ಮುಖ್ಯ  ಮಾಹಿತಿಗಳು  ಲಲಿತಾಳ  ಕಂಪ್ಯೂಟರ್ರಿನಲ್ಲಿ  ಕಂಡೆ-ಅಂದರೆ  ನನಗೆ ಗೋಚರವಾಯಿತು. ಅನುಮಾನ ಬಂದದ್ದರಿಂದ ಅವಳ ಕಂಪ್ಯೂಟರ್ರನ್ನು ನನ್ನ ಜಾಗದಿಂದಲೇ  ಸಂಪೂರ್ಣ  ನೋಡಿಕೊಂಡೆ.  ಸಹಜವಾಗಿಯೇ  ಅವಳಿಗೆ ಏನೂ  ಗೊತ್ತಾಗಲಿಲ್ಲ.  ಅವಳು  ಬಹಳ  ಪರಿಣತಿ  ಇರುವ  ಹ್ಯಾಕರ್!!  ನಮ್ಮ ವೈರಿ ದೇಶಗಳಿಗೆ ನಮ್ಮೆಲ್ಲಾ ಮಾಹಿತಿಯನ್ನು ಒದಗಿಸುತ್ತಿದ್ದಾಳೆ!? ಏನೇನು ಮಾಹಿತಿ ಕದ್ದಿದ್ದಾಳೆ??

ಸೀನ ರಾಜಧಾನಿಗೆ ವರ್ಗಾವಣೆಯಾದ. ರಕ್ಷಣಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದರೂ ಆತನಿಗೆ ರಕ್ಷಣ-ಪ್ರಧಾನ ಮಂತ್ರಿಗಳವರೆಗೂ ಸಂಪರ್ಕವಿದೆ ಎಂದು ಕೇವಲ ಗುಟ್ಟು ರಟ್ಟಾಗದಷ್ಟು ಜನಕ್ಕೆ ಮಾತ್ರ ತಿಳಿದಿದೆ. ಪ್ರೋಫೆಸರ್ ಮಧುಕರ್ ತಮ್ಮ ಅಮೇರಿಕೆಯ ಹುದ್ದೆ ತೊರೆದು ಈಗ ನಮ್ಮ ದೇಶದಲ್ಲಿಯೇ ?ಕೃತಕ ಬುಧ್ಧಿಮತ್ತೆ ಮತ್ತು ಯಂತ್ರಮಾನವ ವಿಜ್ನಾನ? ಇಲಾಖೆಯಲ್ಲಿ ಮುಖ್ಯ ಸಂಶೋಧಕರಾಗಿ ನೇಮಕಗೊಂಡು ತಮ್ಮ ಸಂಶೋಧನೆ ನಡೆಸುತ್ತಿದ್ದಾರೆ. ಅವರನ್ನು ಖುದ್ದಾಗಿ ಭೇಟಿಯಾಗಲು ಕೊಡಗಿನ ಅಚ್ಚಪ್ಪ ಅಥವ ಭೋಪಯ್ಯ, ಕೇರಳದ ಜೋಸೆಫ್, ಕುಟ್ಟಿ; ತಮಿಳುನಾಡಿನ ಮಾಧವನ್ ಹಾಗು ಸೆಲ್ವನ್; ಬಂಗಾಲದಿಂದ ಚೌಧರಿ, ಸೇನ್, ಪಂಜಾಬಿನ ಗುರುದಾಸ್ ಮನ್...ಹೀಗೆ ದೇಶದ ಎಲ್ಲೆಡೆಯಿಂದ ಸದೃಡಕಾಯ ಯುವಕರು ಬರುತ್ತಿರುತ್ತಾರೆ.

ನಮ್ಮ  ಶಸ್ತ್ರಪಡೆಗಳ  ಬಲ-ತಾಕತ್ತು,  ಅಸ್ತ್ರಗಳು,  ಗಡಿಯಲ್ಲಿ  ನಿಲ್ಲಿಸಿರುವ ಯೋಧರ  ಸಂಖ್ಯೆ  ಹಾಗು  ಜಾಗ-  ಹೀಗೆ  ಅನೇಕ    ಸೂಕ್ಷ್ಮ  ಅಂಕಿ- ಅಂಶ,  ಈ-ಮೇಲ್  ಗಳೂ,  ಮೀಟಿಂಗುಗಳಲ್ಲಿ  ನಡೆಯವ  ಚರ್ಚೆ- ನಿರ್ಧಾರಗಳು  ಮತ್ತು  ಬಹುತೇಕ  ಎಲ್ಲವನ್ನೂ  ಅವರಿಗೆ  ರವಾನಿಸುತ್ತಿದ್ದಾಳೆ! ಅವಳ  ಕಂಪ್ಯೂಟರನ್ನು  ಹ್ಯಾಕ್  ಮಾಡಿರೋದ್ರಿಂದ  ನನಗೆ  ಬೇಡವೆಂದರೂ ಎಲ್ಲಾ  ಗೋಚರವಾಗುತ್ತಿರುತ್ತದೆ.  ನೋಡು-ನೋಡು  ಈಗಲೂ  ಅವರುಗಳು ನಮ್ಮ  ಸ್ಯಾಟಲೈಟ್  ಮತ್ತು  ಅಣ್ವಸ್ತ್ರದ  ಬಗ್ಗೆ  ಹೆಚ್ಚು  ಮಾಹಿತಿ  ಪಡೆಯಲು ಯತ್ನಿಸುತ್ತಿದ್ದಾರೆ!!?ಎನ್ನುತ್ತಾ  ತಲೆ  ಹಿಡ್ಕೊಂಡು  ಕಣ್ಮುಚ್ಚಿ  ಏಕಾಗ್ರತೆಯಿಂದ ಕುಳಿತ.

ಈ  ಹಟಾತ್ತಾದ  ತಲೆನೋವಿಗೆ  ಏನು  ಮಾಡಬೇಕೆಂದು  ನಮ್ಮಿಬ್ಬರಿಗೆ ತಿಳಿಯಲಿಲ್ಲ. ತನ್ನ ಆವಿಷ್ಕಾರ ನಿರೀಕ್ಷೆಗಿಂತ ಸಫಲವಾಯಿತೆಂದು ಮಂಜನಿಗೆ ಭಯಕ್ಕಿಂತ  ಖುಷಿ-ಹೆಮ್ಮೆಯೇ  ಜಾಸ್ತಿಯಾದಂತಿತ್ತು.  `ಸೀನಿಗೆ  ನಾನು ತಂದೆ  ಎನಿಸುತ್ತಿದೆ!  ಆತ  ನನ್ನ  ಮಾನಸಿಕ  ಪುತ್ರ,'  ಎಂದೂ  ಭಾವುಕನಾಗಿ ಹೇಳಿಕೊಂಡ.  ನನಗೋ ಬರೀ ಜೈಲು-ವೈದ್ಯರ ಲೈಸೆನ್ಸ್ ಕ್ಯಾನ್ಸಲ್ ಎಂದೆಲ್ಲಾ ತಲೆಕೆಟ್ಟು ಹೋಗಿ, ನೆಮ್ಮದಿ-ನಿದ್ದೆ ಹಾರಿಹೋಗಿತ್ತು. ನಮ್ಮ ಅನಿಸಿಕೆಗಳು ಏನೇ ಇರಲಿ, ಈಗ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು. ಸೂಕ್ಷ್ಮ ಮಾಹಿತಿಗಳು ನಮ್ಮ ವೈರಿಗಳಿಗೆ ರವಾನೆಯಾಗುತ್ತಿವೆ.

ಆಯ್ತಪ್ಪ  ನೀವಿಬ್ಬರೂ  ಇನ್ಮೇಲೆ  ತಂದೆ-ಮಗ!!  ಆದರೆ  ಈಗ  ಇದನ್ನು ಸೂಕ್ತ ಅಧಿಕಾರಿಗಳಿಗೆ ತಿಳಿಸಲೇ ಬೇಕು. ಅದು ಯಾರಿಗೆ''
ಯಾರಿಗೇ  ಆಗಲಿ,  ತಿಳಿಸುವ  ಮೊದಲು  ಮತ್ತೊಂದು  ತುರ್ತು ಕೆಲಸ ಮಾಡಬೇಕಿದೆ.  ಲೋ  ಸೀನ  ಕಣ್  ಬಿಡು.  ಇಲ್  ಕೇಳು.  ನಾನೊಂದು ವೈರಸ್ ಕೊಡ್ತೀನಿ. ಅದನ್ನು ನಿನ್ನ ಸಿಸ್ಟಮ್ ಮೂಲಕ ಆ ದೇಶದ್ರೋಹಿಗಳ ಕಂಪ್ಯೂಟರ್  ಒಳಗೆ  ಬಿಟ್ಟು  ಬಿಡು.  ಅವರ  ಸಿಸ್ಟಮ್  ಗಳೆಲ್ಲಾ  ಕ್ರಾಶ್  ಆಗಿ ಮಾಹಿತಿ ರವಾನೆಯಾಗುವುದಿಲ್ಲ.'

ಸತತವಾಗಿ ಶ್ರಮ ಪಟ್ಟು, ಬೆಳಗಿನ ಮೂರು ಘಂಟೆಯ ಹೊತ್ತಿಗೆ ರಕ್ಷಣಾ ಕಚೇರಿಯ  ಮಾಹಿತಿಯನ್ನ  ಕದಿಯಲಾಗದಂತೆ  ರಕ್ಷಿಸಲು  ಸಾಧ್ಯವಾಯಿತು. ಮೂರು  ದಿನಗಳ  ನಂತರ  ರಕ್ಷಣಾ  ಕಾರ್ಯದರ್ಶಿಗಳೊಂದಿಗೆ  ಸಂದರ್ಶನ ಸಿಕ್ಕಿತು. ಮೂರು ದಿನಗಳು ಸತತವಾಗಿ ನಮ್ಮನ್ನು ಪ್ರಶ್ನಿಸಿದ್ದರು. ನಮ್ಮ ಚರಿತ್ರೆ- ಜೀವನಗಳನ್ನು  ಜಾಲಾಡಿದರು.  ನಂತರ  ಮಹಾಕಾವ್ಯದ  ಪಾತ್ರಧಾರಿಗಳಾದ ನಮ್ಮ ಜೀವನಗಳು ಮಹತ್ತರ ತಿರುವು ಪಡೆದವು...

ಸೀನ ರಾಜಧಾನಿಗೆ ವರ್ಗಾವಣೆಯಾದ. ರಕ್ಷಣಾ ಇಲಾಖೆಯಲ್ಲಿ ಪ್ರಥಮ ದರ್ಜೆ  ಸಹಾಯಕನಾಗಿದ್ದರೂ  ಆತನಿಗೆ  ರಕ್ಷಣ-ಪ್ರಧಾನ  ಮಂತ್ರಿಗಳವರೆಗೂ ಸಂಪರ್ಕವಿದೆ  ಎಂದು  ಕೇವಲ  ಗುಟ್ಟು  ರಟ್ಟಾಗದಷ್ಟು  ಜನಕ್ಕೆ  ಮಾತ್ರ ತಿಳಿದಿದೆ.  ಪ್ರೋಫೆಸರ್  ಮಧುಕರ್  ತಮ್ಮ  ಅಮೇರಿಕೆಯ  ಹುದ್ದೆ  ತೊರೆದು ಈಗ  ನಮ್ಮ  ದೇಶದಲ್ಲಿಯೇ  `ಕೃತಕ  ಬುಧ್ಧಿಮತ್ತೆ  ಮತ್ತು  ಯಂತ್ರಮಾನವ ವಿಜ್ಞಾನ'  ಇಲಾಖೆಯಲ್ಲಿ  ಮುಖ್ಯ  ಸಂಶೋಧಕರಾಗಿ  ನೇಮಕಗೊಂಡು ತಮ್ಮ  ಸಂಶೋಧನೆ  ನಡೆಸುತ್ತಿದ್ದಾರೆ.  ಅವರನ್ನು  ಖುದ್ದಾಗಿ  ಭೇಟಿಯಾಗಲು ಕೊಡಗಿನ  ಅಚ್ಚಪ್ಪ  ಅಥವ  ಭೋಪಯ್ಯ,  ಕೇರಳದ  ಜೋಸೆಫ್,  ಕುಟ್ಟಿ; ತಮಿಳುನಾಡಿನ  ಮಾಧವನ್  ಹಾಗು  ಸೆಲ್ವನ್;  ಬಂಗಾಲದಿಂದ  ಚೌಧರಿ, ಸೇನ್,  ಪಂಜಾಬಿನ  ಗುರುದಾಸ್  ಮನ್...  ಹೀಗೆ  ದೇಶದ  ಎಲ್ಲೆಡೆಯಿಂದ ಸದೃಡಕಾಯ ಯುವಕರು ಬರುತ್ತಿರುತ್ತಾರೆ. ಇವರೆಲ್ಲರೂ ದೇಶದ ನೌಕಾಪಡೆ, ವಾಯುಪಡೆ,  ಸೇನಾಪಡೆಗಳಲ್ಲಿ  ಸೇವೆ  ಸಲ್ಲಿಸುತ್ತಿರುವ  ಯೋಧರೆಂದು  ಯಾರಿಗೂ  ತಿಳಿದಿರುವುದಿಲ್ಲ.  ತಮ್ಮ  ಕಾರ್ಯನಿಯೋಜನೆಯನ್ನು ಪೂರ್ಣಗೊಳಿಸಿ ವಾಪಸ್ಸಾಗುವಾಗ ಮಧುಕರ ಮತ್ತು ಆ ಯುವಕರ ನಡುವೆ ತಂದೆ-ಮಕ್ಕಳ ಬಾಂಧವ್ಯ ಸೃಷ್ಟಿಯಾಗಿರುತ್ತಿತ್ತು.  

  ನಾನು?!!! ದೇಶದ ಸಣ್ಣ ಊರಿನಲ್ಲಿ, ಹೆಚ್ಚು ಹೆಸರು ಮಾಡಿರದ, ಅದರೆ ಅತ್ಯಾಧುನಿಕ ಸೌಲಭ್ಯಗಳಿದ್ದ ಆಸ್ಪತ್ರೆಯಲ್ಲಿ ಬೆನ್ನು ಮೂಳೆ-ನರಮಂಡಲದ ವೈದ್ಯನಾಗಿ  ಕೆಲಸ  ಮಾಡುತ್ತಿದ್ದೇನೆ.  ಆಗೊಮ್ಮೆ  ಈಗೊಮ್ಮೆ  ಭೋಪಯ್ಯ, ಕುಟ್ಟಿ,  ಮಾಧವನ್,  ಗುರುದಾಸ  ಮನ್,  ಚೌದರಿ  ಎಂಬ  ಯುವಕರಿಗೆ ಬೆನ್ನು  ನೋವು-ಕಾಲುನೋವಿಗೆ  ಶಸ್ತ್ರಚಿಕಿತ್ಸೆಯ  ಅಗತ್ಯವಿದೆ  ಎಂದು  ಕರೆ ಬರುತ್ತದೆ. ಅವರುಗಳ ಆಪರೇಶನ್ ಗಳ ಬಗ್ಗೆ ಏನೂ ಪ್ರಶ್ನೆಮಾಡಬಾರದು ಎಂಬ  ಇಂಗಿತವಿದೆ.  ಆಪರೇಶನ್  ಮುಗಿದ  ಮೂರುದಿನಕ್ಕೆ  ಹೆಚ್ಚು  ಸದ್ದು- ತಕರಾರಿಲ್ಲದೆ, ಅವರೆಲ್ಲ ವಾಪಸ್ಸಾಗುತ್ತಾರೆ.

ಇತ್ತೀಚೆಗೆ  ನಮ್ಮ  ದೇಶ  ಗಡಿಗಳಲ್ಲಿ  ವೈರಿಗಳ  ಮೇಲೆ  ಸತತವಾಗಿ ಮೇಲುಗೈ  ಸಾಧಿಸುತ್ತಿರುವುದು,  ಅನೇಕ  ಭಯೋತ್ಪಾದಕ  ಪ್ಲಾನ್  ಗಳನ್ನು ಮೊಗ್ಗಿನಲ್ಲೇ ಚಿವುಟಿಹಾಕುತ್ತಿರುವುದನ್ನು ಬಲ್ಲವರು ಬಹಳವಾಗಿ ಶ್ಲಾಘಿಸಿದ್ದಾರೆ. ಆದರೆ ಅದು ಹೇಗೆಂದು ಅವರುಗಳಿಗೆ ತಿಳಿದಿಲ್ಲ. ತಮ್ಮ ಸೂಕ್ಷ್ಮ ಮಾಹಿತಿಗಳು ಹೇಗೆ  ಸೋರುತ್ತಿದೆ  ಎಂದು  ವೈರಿ  ರಾಷ್ಟಗಳು  ತಲೆ  ಕೆಡಿಸಿಕೊಳ್ಳುತ್ತಲಿವೆ. ಭೋಪಯ್ಯ,  ಕುಟ್ಟಿ  ಮಾಧವನ್,  ಗುರುದಾಸ್  ಎಲ್ಲರೂ  ಗಡಿಗಳಲ್ಲಿ, ಮುಂಚೂಣಿಯಲ್ಲಿ  ಮೊದಲಿನಂತೆಯೇ  ತಮ್ಮ  ರಕ್ಷಣಾ  ಕಾರ್ಯಗಳನ್ನೂ ನೆರವೇರಿಸುತ್ತಿದ್ದಾರೆ.ಹೀಗೆ  ಬರೇ  ಸೈಬರ್  ಶ್ರೀನಿವಾಸ  ಆಗಬೇಕಿದ್ದ  ನಮ್ಮ ಶ್ರೀನಿವಾಸ ಪುರಾಣವೇ ಆಗಿಹೋದ.

Comments :

Post a Comment